ಬುಧವಾರ, ಸೆಪ್ಟೆಂಬರ್ 24, 2008

ಹಿಂದೂಗಳೇ ಜೋಕೆ !!!

ಸುಮಾರು ೫ ವರ್ಷ ದ ಹಿಂದೆ ನಡೆದ ಘಟನೆ , ಅಂದು ಬೆಳಿಗ್ಗೆ ಸುಮಾರು ೧೧ ಗಂಟೆ , ಅಮ್ಮ ಮನೆಯಲ್ಲಿ ಅಡುಗೆ ಮಾಡುವ ತರತುರಿಯಲ್ಲಿದ್ದಳು .ಅವಾಗ ಮನೆಗೆ ಕೇರಳ ಮೂಲದ ಒಬ್ಬ ವ್ಯಕ್ತಿ ಬಂದ , ಅವನ ಹೆಂಡತಿ ಹೆರಿಗೆ ಗಾಗಿ ಪಕ್ಕದ ಆಸ್ಪತ್ರೆಯಲ್ಲಿ ಸೀರಿಸಿರುವುದಾಗಿ ಅವಳಿಗೆ ಕುಡಿಯಲು ಬಿಸಿ ನೀರು ಬೇಕೆಂದು ಕೇಳಿದ . ನನ್ನ ಅಮ್ಮ ಕೇರಳ ಮೂಲದವರಾಗಿದ್ದರಿಂದ ಸಹಜ ವಾಗಿಯೇ , ಮಲಯಾಳಂ ನಲ್ಲಿ ಮಾತನಾಡಿದರು , ಅವರು ಆತನಿಗೆ ಒಂದು ಫ್ಲಾಸ್ಕ್ ನಲ್ಲಿ ಬಿಸಿನೀರು ಮತ್ತು ಅವನು ಕೇಳದೆಯೇ ಇನ್ನೊಂದು ಫ್ಲಾಸ್ಕ್ ನಲ್ಲಿ ಟೀ ಹಾಕಿ ಕೊಟ್ಟರು ಮತ್ತೆ ಏನಾದರು ಬೇಕಿದ್ದರೆ ಮನೆಗೆ ಬನ್ನಿ ಎಂದರು . ಅವನು ಥ್ಯಾಂಕ್ಸ್ ಹೇಳಿ ಆಸ್ಪತ್ರೆ ಗೆ ಹೋದ . ನಂತರ ಮಾರನೆಯ ದಿನ ಮನೆಗೆ ಬಂದು , ಹೆಂಡತಿಯ ಹೆರಿಗೆ ಆಯಿತೆಂದು ಹೇಳಿದ . ನನ್ನ ಅಮ್ಮ ಆತ ಮಲಯಾಳಂ ನಲ್ಲಿ ಮಾತನ್ದಿದ್ದರಿಂದ ಸ್ವಲ್ಪ ಸರಾಗ ವಾಗಿ ಮಾತನಾಡಿದರು , ಅ ಮಾತು ಮನೆ ಮತ್ತು ಜೀವನದ ಕಷ್ಟ ಸುಖದ ಕಡೆಗೆ ತಿರುಗಿತು .ಆತ ತಾನು ಒಬ್ಬ ಕ್ರಿಸ್ತಿಯನ್ ಎಂದು ಹೇಳಿದ , ಮತ್ತು ಯೇಸು ತನ್ನ ಕಷ್ಟಗಳನ್ನು ನಿವರಿಸದನು ಎಂದ. ನಾವು ನಮ್ಮ ಕಷ್ಟಗಳು ನಿವಾರಣೆ ಯಾದಾಗ ದೇವರನ್ನು ನೆನೆಯುವುದು ಸಹಜ ವಲ್ಲವೇ. ಮತ್ತೆ ಎರಡು ವಾರದ ನಂತರ ಅವನು ತನ್ನ ಹೆಂಡತಿ ಮತ್ತು ಮಗುವನ್ನು ಮನೆಗೆ ಕರೆತಂದ , ಅಮ್ಮ ಅವರಿಗೆ ಟೀ ಮತ್ತು ಬಿಸ್ಕೆಟ್ ಕೊಟ್ಟು ಉಪಚರಿಸಿದರು , ಮತ್ತೆ ಸಹಾಯ ಮಾಡಿದ್ದಕ್ಕೆ ಧನ್ಯವಾದ ಹೇಳಿ ಹಿಂದುರುಗಿದ .
ಅಲ್ಲಿಂದ ಶುರವಾಯಿತು ಅವನ ನಿಜವಾದ ಉದ್ದೇಶ ...ಮತ್ತೆ ಮಾರನೆಯ ದಿನ ಮನೆಗೆ ಬಂದ ನೀವು ನಿಮ್ಮ ಕಷ್ಟಗಳನ್ನು ನಂಗೆ ಹೇಳಿದಿರಿ ನನಗೆ ನೀವು ಅಕ್ಕ ಇದ್ದಹಾಗೆ , ನನಗೆ ಯೇಸು ಎಲ್ಲವನು ನೀಡಿದ್ದಾನೆ , ನೀವು ಕೂಡ ಯೇಸು ವನ್ನು ನಂಬಿ ಪ್ರಾರ್ಥಿಸಿ ಅವನು ನಿಮ್ಮ ಕಷ್ಟಗಳನೆಲ್ಲ ದೂರ ಮಾಡುತ್ತಾನೆ ಎಂದ. ಮತ್ತೆ ತಾನು ತಂದಿದ್ದ ಬೈಬಲ್ ತೆಗೆದು ಕೈಮುಗಿದು ನಿಲ್ಲಿ ನಾನು ಯೇಸು ವಿನ ಪವಿತ್ರ ವಾಕ್ಯ ವನ್ನು ಓದುವೆ ಎಂದು , ಬೈಬಲ್ ನಲ್ಲಿ ಎರಡು ಪರಗಳನ್ನು ಓದಿದ . ಮತ್ತೆ ಮಾರನೆ ದಿನ ಬಂದಾಗ ಮನೆಯಲ್ಲಿ ನಾನಿದ್ದೆ , ಅವನಿಗೆ ನೀನು ಮತಾಂತರ ಮಾಡುವ ಉದ್ದೇಶ ದಿಂದ ಮನೆಗೆ ಬರುವುದಾದರೆ ಇನ್ನೊಮ್ಮೆ ಮನೆಯ ಕಡೆ ತಲೆ ಹಾಕಬೇಡ ಎಂದೆ , ಅವತ್ತು ಹೋದವ ಇನ್ನೊಮ್ಮೆ ಮನೆ ಕಡೆ ಬರಲೇ ಇಲ್ಲ !!!
ಇದು ಯಾವೊದೋ ಕಥೆ ಯಲ್ಲ ನಮ್ಮ ಮನೆಯಲ್ಲಿ ನಡೆದ ಸತ್ಯ ಘಟನೆ , ನಾನು ಇಲ್ಲಿ ಈ ಘಟನೆ ಯನ್ನು ಉಲ್ಲೇಖಿಸಲು ಕಾರಣ ಇಷ್ಟೇ , ಕೆಲ ದಿನಗಳ ಹಿಂದೆ ನಮ್ಮ ಮಂಗಳೂರಿನಲ್ಲಿ ನಡೆದ ಚರ್ಚ್ ಗಳ ಮೇಲೆ ನಡೆದ ಧಾಳಿ ಹಾಗು ಅದರ ನೆಪ ಒಡ್ಡಿ ಕ್ರಿಸ್ತ ಸಮುಧಾಯ ದವರು ನಡೆಸಿದ ಪ್ರತಿಭಟನೆ ಮತ್ತು ಅದಕ್ಕೆ ನಮ್ಮ ಕೆಲವು ರಾಜಕೀಯ ಪಕ್ಷಗಳ ಬೆಂಬಲದ ಹೇಳಿಕೆಗಳು , ವ್ಯಾಟಿಕನ್ ನ ಪೋಪರನ್ನೇ ಮೀರಿಸುವಂತಿತ್ತು. ಕೆಲ so called ಸೆಕ್ಯುಲರ್ ಪಕ್ಷಗಳು ! ಕಣ್ಣಿಟ್ಟಿರುವ ಮಿನೋರಿಟಿ ವೋಟು ಬ್ಯಾಂಕ್ , ಮತ್ತು ಹಿಂದೂ ಗಳಲ್ಲಿ ಇಲ್ಲದ ಒಗ್ಗಟ್ಟನ್ನು ಆ ಪಕ್ಷಗಳು ಚೆನ್ನಾಗಿಯೇ ಬಳಸಿಕೊಂಡಿವೆ .
ಇಷ್ಟಕ್ಕೂ ಈ ಮತಾಂತರಕ್ಕೆ ಕಾರಣ ಹುಡುಕುತ್ತ ಹೋದರೆ ಅದು ನಮ್ಮನ್ನೇ ಅಂದರೆ ಹಿಂದೂ ಗಳನ್ನೇ ಮುಖ ಮಾಡಿ ತೋರಿಸುತ್ತದೆ . ನಮ್ಮಲಿರುವ ಜಾತಿ ಪದ್ಧತಿ , ಬಡತನ ಇತ್ಯಾದಿಗಳು .ಹಾಗಿದ್ದರೆ ಅದನ್ನು ಸರಿಪಡಿಸುವುದು ಹೇಗೆ? ಉತ್ತರ ಕೂಡ ನಮ್ಮಲ್ಲಿಯೇ ಇದೆ . ನಾವು ಪರಸ್ಪರ ಒಗ್ಗಟ್ಟಿನಿಂದ ಇದ್ದಿದರೆ ಇಷ್ಟೆಲ್ಲಾ ಆಗುತ್ತಿತ್ತೆ? ಉದಾಹರಣೆಗೆ ನೆರೆಯ ಪಾಕಿಸ್ತಾನವನ್ನೇ ತೆಗೆದುಕೊಳ್ಳಿ ಅಲ್ಲಿ ಅವರವರು ಪರಸ್ಪರ ಹೊಡೆದಾಡುತ್ತಿದ್ದರು ತಮ್ಮ ಧರ್ಮದ ವಿಷಯ ಬಂದಾಗ ಎಲ್ಲವನ್ನು ಮರೆತು ಒಗ್ಗಟ್ಟಿನಿಂದ ಇರುತ್ತಾರೆ ಆದುದರಿಂದಲೇ ಅಲ್ಲಿ ಮತಾಂತರ ಮಾಡಲು ಯಾರು ಹೋಗುವುದಿಲ್ಲ .
ಮೊನ್ನೆ ನಡೆದ ಗಲಭೆಯನ್ನೇ ತೆಗೆದುಕೊಳ್ಳೋಣ ಅಲ್ಲಿ ಹಿಂದೂ ಗಳು ಚರ್ಚ್ ಗಳಿಗೆ ಧಾಳಿ ಮಾಡಿ ಪ್ರತಿಭಟಿಸಿದರು , ಬರಿ ಧಾಳಿ ಇಂದ ಈ ಮತಾಂತರವನ್ನು ನಿಲ್ಲಿಸಲು ಸಾಧ್ಯ ವೆ ಎಂದು ಮೊದಲು ಯೋಚಿಸಬೇಕು . ಅ ಪ್ರತಿಭಟನೆ ಇಂದ ಕ್ರಿಸ್ತ ಮಿಷಿನರಿ ಗಳಿಗೆ ಭಯ ಮುತ್ತಿಸಿರುವುದಂತು ನಿಜ ಆದರೆ ನಾವು ಮೊದಲು ಯಚಿಸಬೇಕಾಗಿರುವುದು ಈ ಮತಾಂತರ ಮಾಡುವವರ ಮೊದಲ target ಯಾರೆಂದು ? ಯಾರನ್ನು ಮತಾಂತರ ಮಾಡುತ್ತಾರೆ? ಇದನ್ನು ನೋಡಿದರೆ ಮೊದಲು ನಮ್ಮ ಹಿಂದೂ ಧರ್ಮದವರಾಗಿಯು ಧರ್ಮ ದ ಬಗ್ಗೆ ಅಷ್ಟಾಗಿ ತಿಳಿದಿಲ್ಲದವರು, ಬಡವರು , ಆದಿವಾಸಿಗಳು . ಇವರ ಹಿನ್ನಲೆಯನ್ನು ನೋಡಿದರೆ ಈ ಜನರ ಮೊದಲ ಆಧ್ಯತೆ ಇರಲು ಒಂದು ಜಾಗ , ಊಟ ಮತ್ತು ಬಟ್ಟೆ . ಈ weekness ಅನ್ನು ಕ್ರಿಸ್ತ ಮಿಷಿನರಿ ಗಳು ಮತಾಂತರ ಮಾಡಲು ಉಪಯೋಗಿಸಿಕೊಳ್ಳುತ್ತಿವೆ. ಹಾಗಿದ್ದರೆ ಈ ಬಡತನ ವನ್ನು ಪರಿಹರಿಸಬೇಕಾಗಿರುವುದು ಯಾರು ? ಸರ್ಕಾರವೇ ?ಅಥವಾ ಪ್ರಜೆಗಳೇ? ಹಾಗೆ ನೋಡಿದರೆ ಇದರಲ್ಲಿ ಸರ್ಕಾರ ಹಾಗು ಪ್ರಜೆಗಳ ಜವಾಬ್ದಾರಿ ಶೇಖಡ ೨೫ : ೭೫ ರಷ್ಟಿದೆ ಅಂದರೆ ನಮ್ಮ ಜವಾಬ್ದಾರಿಯೇ ಹೆಚ್ಚು .
ಇಲ್ಲಿ ಪ್ರಜೆಗಳ ಅಥವಾ ಸಮಾಜದ ಜವಾಬ್ಧಾರಿಯನ್ನು ಹಿಂದೂ ಮಠಗಳು ಮಾಡಬೇಕಿದೆ. ಕೇವಲ ಆಧ್ಯಾತ್ಮಿಕ ಜ್ಞ್ಯನ ಒಂದರಿಂದ ಮಾತ್ರವೇ ಹಿಂದೂಗಳನ್ನೂ ಮತಾಂತರ ದಿಂದ ರಕ್ಷಿಸಲು ಸಾಧ್ಯವಿಲ್ಲ . ಬಡವರಿಗೆ ಮಠ ಮಾನ್ಯಗಳು ಮನೆ ಕಟ್ಟಿಸಿಕೊದುವುದು , ಕಾಯ್ಲಾಗದವರಿಗೆ ಅಂಗವಿಕಲ ಹಿಂದುಗಳಿಗೆ ಮಾಶಾಸನ , ಬಡ ವಿಧ್ಯಾರ್ಥಿ ಗಳಿಗೆ ಉಚಿತ ಶಿಕ್ಷಣ ಮುಂತಾದವುಗಳನ್ನು ಮಾಡಿ ಸಮಾಜದ ಉದ್ಧಾರಕ್ಕಾಗಿ ಶ್ರಮಿಸಬೇಕಾದ ಮಠಗಳು ಇಂದು ಜಾತಿಯ ಹೆಸರಿನಲ್ಲಿ ಕಚ್ಹಾಡುತ್ತಿವೆ .
ಉದಾಹರಣೆಗೆ ಇತ್ತೆಚಿನ ಗೋಕರ್ಣ ದೇವಾಲಯವನ್ನು ರಾಮಚಂದ್ರಾಪುರ ಮಠಕ್ಕೆ ಹಸ್ತಾನ್ತರಿಸಿದ್ದನ್ನು ಎಷ್ಟು ಹಿಂದೂ ಪರ ಸಂಘಟನೆಗಳು, ಮಠಗಳು ಸ್ವಾಗತಿಸಿದವು ,ಇದನ್ನೇ ನೆಪವಾಗಿಟ್ಟುಕೊಂಡು ಕೆಲವು ಮಠಗಳು ಕೆಲವು ದೇವಸ್ತಾನ ಗಳನ್ನು ತಮಗೆ ಹಸ್ತಾಂತರಿಸಿ ಎಂದು ಕೇಳಲು ಮರೆಯಲಿಲ್ಲ ? ಉಡುಪಿಯ ಕನಕ ಗೋಪುರ ವಿವಾದ ಎದ್ದಾಗ ಎಷ್ಟು ಹಿಂದೂ ಪರ ಸಂಘಟನೆಗಳು , ಮಠಗಳು ಉಡುಪಿ ಮತವನ್ನು ಬೆಂಬಲಿಸಿತು? ಇಷ್ಟೆಲ್ಲಾ ಏಕೆ ಉಡುಪಿ ಕನಕ ಗೋಪುರ ವಿವಾಧವು ಹುಟ್ಟಿದ್ದು ಯಾವ ಕಾರಣದಿಂದ ? ಕೇವಲ ಮತಗಳಿಗೊಸ್ಕರ ಜಾತಿಯ ಹೆಸರಿನಿಂದ ಹಿಂದೂ ಗಳನ್ನೂ ಒಡೆಯಲು ಯೇತ್ನಿಸಿದ ಕೆಲವು ರಾಜಕಾರಣಿಗಳಿಂದ .
ಹಿಂದೂ ಬಡವರನ್ನು ಮತಾಂತರ ಮಾಡಲು ಪ್ರಯತ್ನಿಸುತಿರುವುದನ್ನು ತಡೆಯಲು ಸಮಾಜ ಏನು ಮಾಡಿದೆ? ಕೇವಲ ಕ್ರಿಸ್ತರನ್ನು ದೂಷಿಸುವುದು ಸರಿಯಲ್ಲ , ಇಲ್ಲಿ ಒಬ್ಬ ಬಡ ಹಿಂದೂ ಸಹಾಯ ಕೇಳಿದರೆ ಅವನು ಯಾವ ಜಾತಿ ಎಂದು ಕೇಳುತ್ತೇವೆ , ನಮ್ಮ ಜಾತಿಯವನಲ್ಲದಿದ್ದರೆ ಅವನಿಗೆ ಸಹಾಯ ಮಾಡುತ್ತೆವ ? ಅವನು ನಮ್ಮ ಜಾತಿಯವನೇ ಆಗಿದ್ದರು ಸಹಾಯ ಮಾಡುವುದು ಕಷ್ಟ , ಹೀಗಿರುವಾಗ ಕ್ರಿಸ್ತರು ಸಹಾಯ ಮಾಡುವಾಗ ಬಡವರು ಸಹಜವಾಗಿಯೇ ಆ ಧರ್ಮದತ್ತ ಹೋಗುತ್ತಾರೆ . ಇದನ್ನು ತಡೆಯಲು ಎಲ್ಲ ಮಠ ಮಾನ್ಯಗಳು ಒಗ್ಗುಡಬೇಕಾಗಿದೆ ,
ಇಲ್ಲದಿದ್ದರೆ ಭಾರತ ವನ್ನು ರಕ್ಷಿಸಲು ಯಾರಿಂದಲೂ ಸಾಧ್ಯವಿಲ್ಲ !!!!

1 ಕಾಮೆಂಟ್‌:

Unknown ಹೇಳಿದರು...

if our hindus know's well about hinduism why will they go for othere community. there is no one to preach about hindutva or hinduism. people simply living saying we are hindu's how many persons knows about hindutva. we should see where all these personals trying to change community and we should try to convince our persons even our community is good enough. it is only ignorance of our people which they are using.