ಸೋಮವಾರ, ಸೆಪ್ಟೆಂಬರ್ 29, 2008

ಈ ಜೀವನದ ನಡೆ ಎಲ್ಲಿಗೆ?

ಒಬ್ಬ ಮುದುಕ ತನ್ನ ಮೊಮ್ಮಗನನ್ನು ಪ್ರತಿ ದಿನ ಬೆಳಿಗ್ಗೆ ಮತ್ತು ಸಂಜೆ ಹತ್ತಿರದ ತೋಟ ಒಂದರಲ್ಲಿ walking ಕರೆದೊಯ್ಯುತಿದ್ದ . ಅಲ್ಲಿ ಬಗೆ ಬಗೆಯ ಹೂವುಗಳು , ಬಣ್ಣದ ಚಿಟ್ಟೆ ಗಳು ಹಾರಡುತಿದ್ದವು, ಇವೆಲ್ಲವೂ ಅವನ ಮನಸ್ಸಿಗೆ ಮುದ ನೀಡುತ್ತಿದ್ದವು . ಹೀಗೆ ಒಮ್ಮೆ ಅ ತೋಟ ದಲ್ಲಿ ಸಾಗುತ್ತಿರುವಾಗ ಅ ಹುಡುಗ ನಿಗೆ ಒಂದು ರುಪಾಯೀ ನಾಣ್ಯ ಒಂದು ಸಿಕ್ಕಿತು ಅದನ್ನು ಅ ಹುಡುಗ ತಂದು ಮನೆಯಲ್ಲಿ ತನ್ನಹತ್ತಿರ್ವಿದ್ದ ಒಂದು ಗೊಲಕದಲ್ಲಿ ಹಾಕಿಟ್ಟ , ಮತ್ತೆ ಮಾರನೆ ದಿನವು ಹೀಗೆ ಅಜ್ಜನೊಡನೆ ನಡೆದು ಹೋಗುವ ದಾರಿಯಲ್ಲಿ ಮತ್ತೆ ಅದೇ ರೀತಿ ಒಂದು ರುಪಾಯೀ ನಾಣ್ಯವೊಂದು ದೊರೆಯಿತು . ಮತ್ತೆ ಅವನು ಅದನ್ನು ಮನೆಯಲ್ಲಿದ್ದ ಗೊಲಕದಲ್ಲಿ ಹಾಕಿದ. ಹೀಗೆ ಅಜ್ಜನೊಡನೆ ತೋಟ ದಲ್ಲಿ ನಡೆದುಹೂಗುವಾಗೆಲ್ಲ ಆ ಹುಡುಗ ನೆಲವನ್ನೇ ನೋಡಿಕೊಂಡು ಹೋಗುತ್ತಿದ್ದ ಒಂದು ರುಪಯೀ ನಾಣ್ಯ ವನ್ನು ಹುಡುಕುತ್ತ !
ಹೀಗೆ ಸುಮಾರು ತಿಂಗಳು ಗಳು ಕಳೆದವು . ಒಂದು ದಿನ ಆ ಹುಡುಗ ಅಜ್ಜನ ಹತ್ತಿರ ಹೋಗಿ ತನಗೆ ಸಿಕ್ಕಿದ್ದ ಆ ನಾಣ್ಯಗಳನೆಲ್ಲ ಶೇಕರಿಸಿ ಬಂದಿದ್ದ ೫೦೦ ರುಪಾಯೀಗಳನ್ನು ನೀಡಿ ಹೇಳಿದ ಇದು ಆ ತೋಟ ದಲ್ಲಿ ನಡೆದು ಹೋಗುವಾಗ ಸಿಕ್ಕಿದ ಹಣ ಎಂದು. ಅಜ್ಜನಿಗೆ ಸಂತೋಷವಾಯಿತು .
ಅವನು ಮೊಮ್ಮಗನನ್ನು ಕುರಿತು ಹೇಳಿದ ಹುಡುಗ ನೀನು ಅಲ್ಲಿ ದೊರಕಿದ್ದ ಹಣವನ್ನು ಶೇಕರಿಸಿ ಕಾಪಾಡಿ ಇಟ್ಟಿದ್ದಿಯ ಅದು ನನಗೆ ಬಹಳ ಸಂತೋಷವಾಯಿತು ಆದರೆ ನೀನು ಹಣವನ್ನು ಹುಡುಕುವ ಭರದಲ್ಲಿ ಎಷ್ಟೋ ಸುರ್ಯಾಸ್ತ್ಮನವನ್ನು ಸುರ್ಯೋದಯಗಳನ್ನು ನೋಡುವುದನ್ನು ಮರೆತುಬಿಟ್ಟೆ , ಎಷ್ಟೋ ಬಣ್ಣ ಬಣ್ಣದ ಹೂವುಗಳು ನಿನಗಾಗಿ ಬಿರುದು ಕಾದಿದ್ದವು , ಎಷ್ಟೋ ಚಿಟ್ಟೆಗಳು ಆ ಹೂವುಗಳ ಮೇಲೆ ಕುಳಿತು ಮಕರಂದ ಹೀರುವುದನ್ನು ನೋಡಲು ಮರೆತೇ ಇದು ನನಗೆ ಬೇಸರವಾಗಿದೆ ಎಂದ. ಇಂತಹ ಸನ್ನಿವೇಶ ನಮ್ಮ ಬಾಳಿನಲ್ಲೂ ಅದೆಷ್ಟೋ ಆಗಿದೆ , ಪ್ರತಿನಿತ್ಯ ಆಗುತ್ತಲು ಇದೆ .ಒಮ್ಮೆ ಯೋಚಿಸಿ ನೋಡಿ ನಾವು ಕೂಡ ಹಣ ಮಾಡುವ ಭರದಲ್ಲಿ ಅದೆಷ್ಟೋ ಸುರ್ಯಸ್ತಮವನ್ನು ಸುರ್ಯೋದಗಳನ್ನು ನೋಡುವುದನ್ನು ಮರೆತಿದ್ದೇವೆ , ಅದೆಷ್ಟೋ ಚಿಕ್ಕ ಚಿಕ್ಕ ಸಂತೋಷಗಳನ್ನು ಅನುಭವಿಸಲು ಮರೆತಿದ್ದೇವೆ ಅಲ್ಲವೇ? ಅದೆಷ್ಟೋ ಜನರ ಪ್ರೇಮವನ್ನು ಕಡೆಗಾನಿಸಿದ್ದೇವೆ ? ಅದೆಷ್ಟೋ ಅದೆಷ್ಟೋ ಜನರಿಗೆ ನೋವುಂಟು ಮಾಡಿದ್ದೇವೆ ಅಲ್ಲವೇ ?
ಈ ವಿಷಯದ ಬಗ್ಗೆ ಮಾತನಾಡುವಾಗ ನನಗೆ ಮಾತಾ ಅಮೃತಾನಂದಮಯಿ ಅವರು ಹೇಳಿದ ಒಂದು ಮಾತು ನೆನಪಿಗೆ ಬರುತ್ತಿದೆ ಅದೇನೆಂದರೆ ನಾವು ಮನೆಯಲ್ಲಿ , ಆಫೀಸಿನಲ್ಲಿ ಇತರೆ ಎಲ್ಲಕಡೆಯಲ್ಲಿ ಏರ್ ಕಂಡೀಷನ್ ಅಳವಡಿಸುತ್ತೇವೆ , ಆದರೆ ನಮಗೆ ನಿಜವಾಗಿ ಏರ್ ಕಂಡೀಷನ್ ಅಳವಡಿಸಬೇಕಿರುವುದು ನಮ್ಮ ಮನಸ್ಸಿಗೆ . ಇಂದಿನ ಪ್ರಪಂಚದಲ್ಲಿ ನಾವು ಎಷ್ಟು busy ಇದ್ದೆವೆಂದರೆ ನಮಗೆ ಬೆಳಿಗ್ಗೆ ಏಳುವುದರಿಂದ ಸಂಜೆ office ಮುಗಿಸಿ ಮನೆ ಗೆ ಹಿಂದಿರುಗಿ ಊಟ ಮಾಡಿ ಮಲಗುವವರೆಗೂ , ನಿದ್ದೆ ಬರುವವರೆಗೂ tension, ಇದು ಎಷ್ಟರಮಟ್ಟಿಗೆ ಹೋಗಿದೆಯೆಂದರೆ ಕೆಲವರಿಗೆ ರಾತ್ರಿ ನಿದ್ದೆ ಬರುವ ಮಾತ್ರೆ ತೆಗೆದುಕೊಳ್ಳಲಿಲ್ಲ ವೆಂದರೆ ಅಂದು ನಿದ್ದೆ ಬರುವುದಿಲ್ಲ.
ನಮ್ಮ ಸಾಮನ್ಯ ಜೀವನವನ್ನೇ ತೆಗೆದುಕೊಳ್ಳಿ , ಬೆಳಿಗ್ಗೆ ಎದ್ದು ready ಆಗಿ office ಗೆ ಹೊರಡುವಾಗ office ಹೋಗಲು ಸರಿಯಾದ ಸಮಯಕ್ಕೆ ಬಸ್ ಸಿಗುತ್ತದೆಯೋ ಎಂದು tension , ಬಸ್ ನಲ್ಲಿ ಪ್ರಯಾಣಿಸುತ್ತಿರುವಾಗ office ನಲ್ಲಿ ಅಂದು ಮಾಡಬೇಕಾದ ಕೆಲಸದಬಗ್ಗೆ tension , ಮತ್ತೆ ಆಫೀಸಿನಲ್ಲಿ ಸರಿಯಾದ ಸಮಯಕ್ಕೆ ಕೆಲಸ ಮುಗಿಸಬೇಕೆಂಬ tension , ಕೆಲಸ ಮುಗಿಸಿ ಮನೆಗೆ ಹಿಂದಿರುಗುವಾಗ ಅಂದು ಮಾಡಿದ ಕೆಲಸ ಸರಿಯಾಗಿದೆಯೋ ಇಲ್ಲ ಏನಾದರು ತಪ್ಪಗಿದೆಯೋ ಎಂಬ tension , ಮತ್ತೆ ಮನೆಗೆ ಹಿಂದಿರುಗಿದ ಮೇಲೆ ನಾಳೆ ಹೀಗಿರುತ್ತದೆಂಬ tension. ಒಟ್ಟಿನಲ್ಲಿ ನಮ್ಮ ಜೀವನವೆಲ್ಲ tension ಮಯ ವಾಗಿದೆ .
ನಮಗೆ ಒಂದು ನಿಮಿಷ ಸುಮ್ಮನೆ ಕುಳಿತುಕೊಳ್ಳುವುದಕ್ಕೆ ಆಗುವುದಿಲ್ಲ . ಒಮ್ಮೆ ಸುಮ್ಮನೆ ಕುಳಿತು ನೋಡಿ , ನಮ್ಮ ಮರ್ಕಟ ಮನಸ್ಸಿನಲ್ಲಿ ಎಷ್ಟು ಆಲೋಚನೆಗಳು ಹರಿಯುತ್ತಿರುತ್ತವೆ .


ಮುಂದುವರೆಯುವುದು ...

1 ಕಾಮೆಂಟ್‌:

ವಿದ್ಯಾ ದದಾತಿ 'ವಿನಯಂ' !! ಹೇಳಿದರು...

Yep...U r right Guru. But when Money making becomes the priority, people do tend to forget such things. U have made a nice point here. The relationships are very subtle. So, people shold not ignore the relation ships during the flow of making money.